ಬೈಜೂಬಾವರಾ
16ನೆಯ ಶತಮಾನ. ಗ್ವಾಲಿಯರಿನ ಒಬ್ಬ ಗಾಯಕ. ತಾನಸೇನನ ಸಮಕಾಲೀನ. ಸಂಗೀತ ವಿದ್ವಾಂಸ. ಸ್ವಾಮಿ ಹರಿದಾಸರ ಶಿಷ್ಯ. ಇವನಿಗೂ ತಾನಸೇನನಿಗೂ ಸ್ಪರ್ಧೆ ನಡೆದ ಹಾಗೆ ಆಖ್ಯಾಯಿಕೆಯೊಂದಿದೆ. ಈತ ರಚಿಸಿದ ಅನೇಕ ಧ್ರುಪದಗಳನ್ನು ರಾಗ ಕಲ್ಪದ್ರುಮ ಎಂಬ ಗ್ರಂಥದಲ್ಲಿ ಸಂಗ್ರಹಿಸಿದ್ದು ನೋಡಲು ದೊರೆಯುತ್ತವೆ. ಇವು ಬೈಜೂ ಒಬ್ಬ ಕೃಷ್ಣಭಕ್ತನಾಗಿದ್ದ ಸಂಗತಿಯನ್ನು ಅರಹುತ್ತವೆ. ಕೃಷ್ಣ ಲೀಲೆಯನ್ನು ಈತ ಬಹಳ ಸುಂದರವಾಗಿ ಧ್ರುಪದಗಳಲ್ಲಿ ರಚಿಸಿದ್ದಾನೆ. ಇವನಿಗೆ ಅನೇಕ ಮಂದಿ ಶಿಷ್ಯರಿದ್ದರು ಅವರಲ್ಲಿ ಗೋಪಾಲನಾಯಕನೂ ಒಬ್ಬ. ಆತ ಆ ಕಾಲದ ಭಾರತದ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬನಾಗಿದ್ದ.  
 (ಎಸ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ